ದಿನಾಂಕ 25:4:2024 ರಂದು ಬೆಳಿಗ್ಗೆ 10 ರಿಂದ 11 ಗಂಟೆಯ ವರೆಗೆ ಇಂಗ್ಲಿಷ್ ವಿಭಾಗ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಲ್ಲಿಗೇನಹಳ್ಳಿ ಮತ್ತು ಆಕಾಶವಾಣಿ ಭದ್ರಾವತಿ ಇವರ ವತಿಯಿಂದ ” ಕ್ಯಾಂಪಸ್ ಕಟ್ಟೆ ” – ವಿದ್ಯಾರ್ಥಿಗಳಿಂದ ಕನ್ನಡದ ಖ್ಯಾತ ಲೇಖಕರ ಪರಿಚಯ ನಡೆಸಿಕೊಡಲಾಹಿತು. ಕಾಲೇಜಿನ ವಿದ್ಯಾರ್ಥಿಗಳಾದ ದೀಕ್ಷಾ ವೈ ವಿ, ಸೋನಿಯಾ ಜೈನ್, ಸ್ಫೂರ್ತಿ ವೈ ಹೆಚ್, ಸಂಧ್ಯಾ, ಪೃಥ್ವಿ ಶ್ರೀ ಎನ್, ವ್ಯೆಷ್ಣವಿ ಎಸ್ ಕೆ, ಸಾಕ್ಷಿ ಭಾಗವತ್ ಮತ್ತು ಸಂಗೀತ ಬುದ್ನಿ ಭಾಗವಹಿಸಿ ಮಹಾಶ್ವೇತದೇವಿ, ಗಿರೀಶ್ ಕಾರ್ನಾಡ್, ಪು ತಿ ನರಸಿಂಹಚಾರ್, ಎ ಆರ್ ಮಣಿಕಾಂತ್, ವ್ಯೆದೇಹಿ, ಸಾರಾ ಅಬೂಬಕ್ಕರ್, ಪೂರ್ಣಚಂದ್ರ ತೇಜಸ್ವಿ ಮತ್ತು ಡಾ. ಅಶೋಕ್ ಪೈ ಅವರನ್ನು ಕೇಳುಗರಿಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ, ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ, ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೇಷ್ಮಾ, ಉಪನ್ಯಾಸಕರಾದ ಶ್ರೀ ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿ ಕೇಂದ್ರದ ಡಾ. ಬಸವರಾಜ್ ಟಿ ಎನ್ ಅವರು ನಡೆಸಿಕೊಟ್ಟರು.