• ಕೇವಲ ಸಮಾಜವನ್ನು ಸ್ವಚ್ಛಗೊಳಿಸುವುದರೊಂದಿಗೆ ನಮ್ಮ ಮನೆ ಮತ್ತು ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು – ಶ್ರೀ ಮಂಜುನಾಥ ನಾಯಕ್

    • October 3, 2023
    • Posted By : Kapmi Library
    • Comments Off on ಕೇವಲ ಸಮಾಜವನ್ನು ಸ್ವಚ್ಛಗೊಳಿಸುವುದರೊಂದಿಗೆ ನಮ್ಮ ಮನೆ ಮತ್ತು ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು – ಶ್ರೀ ಮಂಜುನಾಥ ನಾಯಕ್
    • Gandhi Jayanthi

    ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಐ.ಕ್ಯೂ. ಎ.ಸಿ. ಘಟಕ , ಮತ್ತು ಶಿವಮೊಗ್ಗ ಜಿಲ್ಲಾ
    ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಕಾಲೇಜಿನ ದತ್ತು ಗ್ರಾಮ ಸೇವಾಲಾಲ್ ನಗರದ
    ಕೊನಗವಳ್ಳಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತ್ಯಾಜ್ಯ ಮುಕ್ತ ಭಾರತ ಘೋಷವಾಕ್ಯದಡಿ ಸ್ವಚ್ಛತಾ ಸೇವಾ ಅಭಿಯಾನವನ್ನು
    ನಡೆಸಲಾಯಿತು.

    ಕೇವಲ ಸಮಾಜವನ್ನು ಸ್ವಚ್ಛಗೊಳಿಸುವುದು ಅಷ್ಟೇ ಅಲ್ಲದೆ,ನಮ್ಮ ಮನೆ ಮತ್ತು ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು
    ಕಾರ್ಯಕ್ರಮದ ಮುಖ್ಯ ಉದ್ಘಾಟಕರಾದ ಶ್ರೀ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು
    ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಂಜುನಾಥ ನಾಯಕ್ ಅವರು ಅಭಿಪ್ರಾಯಪಟ್ಟರು.

    ನಮ್ಮ ಸುತ್ತಲಿನ ಪರಿಸರದಲ್ಲಿರುವಂತಹ ತ್ಯಾಜ್ಯವನ್ನೂ ತೆಗೆಯಬೇಕು. ಹೆಚ್ಚು ಜನರಿಗೆ ಸ್ವಚ್ಚತೆ ಬಗ್ಗೆ ಅರಿವನ್ನು ಮೂಡಿಸುವ ಕೆಲಸ
    ಆಗಬೇಕು. ಸ್ವಚ್ಚತೆಯ ಕಾರ್ಯ ಸಾಕಾರಗೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ
    ಕಾರ್ಯದರ್ಶಿಗಳಾದ ಶ್ರೀ ಸಿ ಎನ್ ಚಂದನ್ ಅವರು ಮಾತನಾಡಿ, ಎಲ್ಲರೂ ಬಾಹ್ಯ ಶುಚಿತ್ವದೊಂದಿಗೆ ಆಂತರಿಕ ಶುಚಿತ್ವಕ್ಕೆ
    ಮಹತ್ವವನ್ನು ನೀಡಬೇಕು.ಅದರಿಂದ ಮಾತ್ರ ದೇಶ ಸದೃಢ ಮತ್ತು ಸ್ವಚ್ಛವಾಗಿರಲು ಸಾಧ್ಯವಾಗುತ್ತದೆ ಎಂದರು.

    ಕೊನೆಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಯಾ ನಾಯಕ್ ಅವರು ಮಾತನಾಡಿ, ಸೇವಾಲಾಲ್ ನಗರ ಮೊದಲು ಕಳ್ಳಬಟ್ಟಿ
    ಇಳಿಸುವಂತಹ, ದುಷ್ಚಟಗಳಿಗೆ ಒಳಗಾಗಿರುವಂತಹ ಗ್ರಾಮವಾಗಿತ್ತು. ತದನಂತರದಲ್ಲಿ ಎಲ್ಲಾ ವಿದ್ಯಾಭ್ಯಾಸ ಪಡೆದು ಇವತ್ತು ಅತಿ
    ಹೆಚ್ಚು ಜನ ಸರ್ಕಾರಿ ಕೆಲಸದಲ್ಲಿದ್ದಾರೆ. ಈ ಗ್ರಾಮ ವ್ಯಸನಮುಕ್ತ ಗ್ರಾಮವಾಗಿ ಬದಲಾಗುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ನಾಗರಾಜ ಪರಿಸರ
    ವಿದ್ಯಾರ್ಥಿಗಳನ್ನುದೇಶಿಸಿ ಸ್ವಯಂ ಸೇವೆ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

    ವಿದ್ಯಾರ್ಥಿಗಳು ಗಾಂಧಿಜಿಯವರ ಕುರಿತ ಬೆಲ್ಲದ ಕಥೆ ಎಂಬ ನಾಟಕವನ್ನು ಪ್ರದರ್ಶಿಸಿದರು‌.

    ಕೊನಗವಳ್ಳಿಯಲ್ಲಿ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದಿಂದ ಆಗುವ ತೊಂದರೆಗಳ ಬಗ್ಗೆ
    ಗ್ರಾಮಸ್ಥರಲ್ಲಿ ಅರಿವನ್ನು ಮೂಡಿಸಿದರು.

    ಕಾರ್ಯಕ್ರಮದಲ್ಲಿ , ಕೊನೆಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಅನುಸೂಯ ರಾಮ ನಾಯಕ್ , ಮಾನಸ ಟ್ರಸ್ಟ್
    ನಿರ್ದೇಶಕರಾದ ಡಾ. ರಜನಿ ಎ.ಪೈ., ಎಂ. ಸಿ.ಸಿ.ಎಸ್. ನಿರ್ದೇಶಕರಾದ ಡಾ . ರಾಜೇಂದ್ರ ಚೆನ್ನಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ
    ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ., ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ
    ಸಂಯೋಜನಾಧಿಕಾರಿಗಳಾದ ಡಾ. ಸುಕೀರ್ತಿ ಮತ್ತು ರಾಬರ್ಟ್ ರಾಯಪ್ಪ, ಮತ್ತು ಉಪನ್ಯಾಸಕ ವೃಂದ, ಸಿಬ್ಬಂದಿಗಳು ಹಾಗೂ
    ಗ್ರಾಮಸ್ಥರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Recent Comments

    Teaching Positions are Open for for M Phil Clinical Psychology

    Online Registration
    close slider